ಶ್ರೀಮತಿ. ಇಂದಿರಾ ಗಾಂಧಿ – ನೆನಪು 

 ನವೆಂಬರ್ 19, 1917ರಂದು ಸುಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ ಶ್ರೀಮತಿ ಇಂದಿರಾ ಗಾಂಧಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುತ್ರಿ . ಅವರು ಸ್ವಿಟ್ಜಲ್ಯಾಂಡ್ನ ಎಕೊಲೆ ನವೊಲೆ, ಬೆಕ್ಸ್, ಜಿನೆವಾದ ಎಕೊಲೆ ಇಂಟರ್ನ್ಯಾಷನಲ್, ಪೂನಾ ಮತ್ತು ಮುಂಬಯಿಯ ಪ್ಯೂಪಿಲ್ಸ್ ಓನ್ ಸ್ಕೂಲ್, ಬ್ರಿಸ್ಟ್ಟಾಲ್ನ ಬ್ಯಾಡ್ಮಿಂಟನ್ ಸ್ಕೂಲ್, ಶಾಂತಿನಿಕೇತನದ ವಿಶ್ವಭಾರತಿ, ಆಕ್ಸ್ಫರ್ಡ್ನ ಸೊಮರ್ವಿಲ್ಲೆ ಕಾಲೇಜ್ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪೂರೈಸಿದರು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದವು. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಉನ್ನತ ಶ್ರೇಣಿಯನ್ನು ಪಡೆದವರು.ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿದವರು. ಅಸಹಕಾರ ಚಳುವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ ‘ವಾನರ ಸೇನೆ’ಯನ್ನು ಸ್ಥಾಪಿಸಿದರು. 1942ರಲ್ಲಿ ಅವರನ್ನು ಬಂಧಿಸಲಾಯಿತು. 1947ರಲ್ಲಿ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಇಂದಿರಾ ಅವರು ದೆಹಲಿಯ ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು.

 

1942ರ ಮಾರ್ಚ್ 26ರಂದು ಇಂದಿರಾ ಫಿರೋಜ್ ಗಾಂಧಿ ಅವರನ್ನು ವಿವಾಹವಾದರು. ಬಳಿಕ ಇಬ್ಬರು ಗಂಡುಮಕ್ಕಳಿಗೆ ತಾಯಿಯಾದರು. 1955ರಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣೆ ಮತ್ತು ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾದರು. 1958ರಲ್ಲಿ ಕಾಂಗ್ರೆಸ್ನ ಕೇಂದ್ರೀಯ ಸಂಸದೀಯ ಮಂಡಳಿಗೆ ಸದಸ್ಯೆಯಾಗಿ ನೇಮಕಗೊಂಡರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಏಕೀಕರಣ ಸಮಿತಿ ಅಧ್ಯಕ್ಷೆಯಾದರು. 1956ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾದರು. 1959ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆಯಾಗಿ 1960ರವರೆಗೆ ಸೇವೆ ಸಲ್ಲಿಸಿದರು. ಪುನಃ 1978ರಲ್ಲಿ ಇದೇ ಹುದ್ದೆಗೆ ನೇಮಕಗೊಂಡರು.

 

1964-1966 ವರಗೆ ವಾರ್ತಾ ಮತ್ತು ಪ್ರಸಾರ ಸಚಿವೆಯಾಗಿದ್ದರು. ಜನವರಿ 1966ರಿಂದ ಮಾರ್ಚ್ 1977ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿದರು. ಸೆಪ್ಟೆಂಬರ್ 1967ರಿಂದ ಮಾರ್ಚ್ 1977ರವರೆಗೆ ಪರಮಾಣು ಶಕ್ತಿ ಖಾತೆಯ ಸಚಿವರಾಗಿದ್ದರು. ಸೆಪ್ಟೆಂಬರ್ 5, 1967ರಿಂದ ಫೆಬ್ರವರಿ 14, 1969ರವರೆಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಹೊಣೆಯನ್ನೂ ಹೊತ್ತರು. ಜೂನ್ 1970ರಿಂದ ನವೆಂಬರ್ 1973ರವರೆಗೆ ಗೃಹ ಸಚಿವಾಲಯದ ನೇತೃತ್ವವನ್ನು ಶ್ರೀಮತಿ. ಗಾಂಧಿ ವಹಿಸಿಕೊಂಡಿದ್ದರು. ಜೂನ್ 1972ರಿಂದ 1977 ಮಾರ್ಚ್ ತಿಂಗಳವರೆಗೆ ಬಾಹ್ಯಾಕಾಶ ಖಾತೆಯ ಸಚಿವೆಯಾಗಿದ್ದರು.ಜನವರಿ 1980ರಿಂದ ಅವರು ಯೋಜನಾ ಆಯೋಗದ ಅಧ್ಯಕ್ಷೆಯಾಗಿದ್ದರು. ಜನವರಿ 14, 1980ಕ್ಕೆ ಮತ್ತೆ ಪ್ರಧಾನ ಮಂತ್ರಿಯಾದರು.

 

ಕಮಲಾ ನೆಹರೂ ಸ್ಮರಣಾರ್ಥ ಆಸ್ಪತ್ರೆ, ಗಾಂಧಿ ಸ್ಮಾರಕ್ ನಿಧಿ ಮತ್ತು ಕಸ್ತೂರ ಬಾ ಮೆಮೊರಿಯಲ್ ಟ್ರಸ್ಟ್ ಹೀಗೆ ಹಲವಾರು ಸಂಸ್ಥೆಗಳ ಜತೆ ಶ್ರೀಮತಿ. ಇಂದಿರಾ ಗಾಂಧಿ ನಿಕಟ ಸಂಪರ್ಕ ಹೊಂದಿದ್ದರು. ಅವರು ಸ್ವರಾಜ್ ಭವನ ಟ್ರಸ್ಟ್ನ ಅಧ್ಯಕ್ಷೆಯಾಗಿದ್ದರು. ಬಾಲ ಸಹಯೋಗ್ , ಬಾಲ ಭವನ ಮಂಡಳಿ ಮತ್ತು ಮಕ್ಕಳ ರಾಷ್ಟ್ರೀಯ ಸಂಗ್ರಹಾಲಯಗಳ ಜತೆಯೂ ಉತ್ತಮ ಸಂಬಂಧ ಹೊಂದಿದ್ದರು. ಶ್ರೀಮತಿ ಗಾಂಧಿ ಅವರು ಅಲಹಾಬಾದ್ನಲ್ಲಿ ಕಮಲಾ ನೆಹರು ವಿದ್ಯಾಲಯವನ್ನು ಸ್ಥಾಪಿಸಿದರು. 1966-77 ಅವಧಿಯಲ್ಲಿ ಶ್ರೀಮತಿ ಗಾಂಧಿ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ನಾರ್ಥ್ ಈಸ್ಟರ್ನ್ ಯುನಿವರ್ಸಿಟಿಗಳಂತಹ ಬೃಹತ್ ಸಂಸ್ಥೆಗಳ ಜತೆ ಸಂಪರ್ಕ ಹೊಂದಿದ್ದರು. 1060-64ರ ಅವಧಿಯಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯ ಕೋರ್ಟ್ ಮತ್ತು ಯುನೆಸ್ಕೋದ ಭಾರತೀಯ ನಿಯೋಗದ ಸದಸ್ಯೆಯಾಗಿದ್ದರು. ಇದೇ ಅವಧಿಯಲ್ಲಿ ಯುನೆಸ್ಕೋದ ಕಾರ್ಯನಿರ್ವಹಣಾ ಮಂಡಳಿಯ ಸದಸ್ಯೆಯಾಗಿದ್ದರು. 1962ರಲ್ಲಿ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸದಸ್ಯೆಯಾದರು. ಸಂಗೀತ ಮತ್ತು ನಾಟಕ ಅಕಾಡೆಮಿ, ರಾಷ್ಟ್ರೀಯ ಏಕೀಕರಣ ಸಮಿತಿ, ಹಿಮಾಲಯ ಪರ್ವತಾರೋಹಣ ಸಂಸ್ಥೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಹಾಗೂ ಜವಾಹರ ಲಾಲ್ ನೆಹರೂ ಸ್ಮರಣಾರ್ಥ ನಿಧಿ ಇವುಗಳ ಜತೆ ನಿಕಟ ಸಂಬಂಧ ಹೊಂದಿದ್ದರು.

 

ಆಗಸ್ಟ್ 1964ರಿಂದ ಫೆಬ್ರವರಿ 1967ರವರಗೆ ಇಂದಿರಾ ಗಾಂಧಿ ಅವರು ರಾಜ್ಯಸಭೆಯ ಸದಸ್ಯೆಯಾಗಿದ್ದರು. ನಾಲ್ಕು, ಐದು ಮತ್ತು ಆರನೆಯ ಅಧಿವೇಶನಗಳ ವೇಳೆಯಲ್ಲಿ ಅವರು ಲೋಕಸಭಾ ಸದಸ್ಯೆಯಾಗಿದ್ದರು. ಜನವರಿ 1980ರಲ್ಲಿ ಏಳನೆಯ ಲೋಕಸಭೆಗೆ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಆಂಧ್ರ ಪ್ರದೇಶದ ಮೇಡಕ್ನಿಂದ ಚುನಾಯಿತರಾದರು. ಅವರು ಮೇಡಕ್ ಸ್ಥಾನವನ್ನು ಉಳಿಸಿಕೊಂಡು ರಾಯ್ ಬರೇಲಿಯನ್ನು ಸ್ಥಾನವನ್ನು ಬಿಟ್ಟುಕೊಟ್ಟರು. 1967ರಿಂದ 1977ರ ಅವಧಿಯಲ್ಲಿ ಶ್ರೀಮತಿ. ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಸಮಿತಿಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಯಿತು. 1980ರ ಜನವರಿಯಲ್ಲಿ ಮತ್ತೆ ಅದೇ ಸ್ಥಾನಕ್ಕೆ ಅವರು ಆಯ್ಕೆಯಾದರು.

 

ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಮೆಯ ಕಿರೀಟಕ್ಕೆ ಹಲವಾರು ಸಾಧನೆಗಳ ಗರಿಗಳಿದ್ದವು. ಅವರು 1972ರ ಸಾಲಿನ ಭಾರತ ರತ್ನ ಪ್ರಶಸ್ತಿ ಪುರಸ್ಕøತೆ. ಬಾಂಗ್ಲಾದೇಶದ ವಿಮೋಚನೆಗಾಗಿ ಮೆಕ್ಸಿಕನ್ ಅಕಾಡೆಮಿ ಪ್ರಶಸ್ತಿ ಅದೇ ವರುಷ ಲಭ್ಯವಾಗಿತ್ತು. 1973ರಲ್ಲಿ ಎಫ್ಎಒನ ದ್ವಿತೀಯ ವಾರ್ಷಿಕ ಪದಕ, 1976ರರಲ್ಲಿ ನಗರಿ ಪ್ರಚಾರಿಣಿ ಸಭಾ ಕೊಡಮಾಡುವ ಸಾಹಿತ್ಯ ವಚಸ್ಪತಿ (ಹಿಂದಿ) ಪ್ರಶಸ್ತಿ, 1953ರಲ್ಲಿ ಅಮೆರಿಕಾದ ಮದರ್ಸ್ ಅವಾರ್ಡ್, ರಾಜನೀತಿಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಇಟೆಲಿಯ ಐಸ್ಲೆಬೆಲ್ಲಾ ಡಿ ಎಸ್ಟೆ ಪ್ರಶಸ್ತಿ, ಯಾಲೆ ವಿಶ್ವವಿದ್ಯಾಲಯದ ಹೌಲ್ಯಾಂಡ್ ಮೆಮೋರಿಯಲ್ ಪ್ರಶಸ್ತಿ ಲಭಿಸಿದವು. ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪೀನಿಯನ್ ಕೈಗೊಂಡ ಸಮೀಕ್ಷೆಗಳ ಪ್ರಕಾರ ಅವರು 1967 ಮತ್ತು 1968 ಎರಡು ವರುಷಗಳಲ್ಲಿ ನಿರಂತರವಾಗಿ ಶ್ರೀಮತಿ ಇಂದಿರಾ ಗಾಂಧಿ ಫ್ರೆಂಚರ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಮಹಿಳೆ ಎಂಬ ವಿಷಯವನ್ನು ತಿಳಿಸಿತು. 1971ರಲ್ಲಿ ಅಮೆರಿಕಾದಲ್ಲಿ ನಡೆದ ವಿಶೆಷ ಗ್ಯಾಲಪ್ ಸಮೀಕ್ಷೆ ಪ್ರಕಾರ ಅವರು ಪ್ರಪಂಚದಲ್ಲೇ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ವ್ಯಕ್ತಿ. ಪ್ರಾಣಿಗಳ ರಕ್ಷಣೆಗಾಗಿ 1971ರಲ್ಲಿ ಅಂರ್ಜೆಟಿನಾ ಸೊಸೈಟಿ ಅವರಿಗೆ ಗೌರವ ಡಿಪ್ಲೊಮಾ ಪ್ರದಾನ ಮಾಡಿತು.

 

ದಿ ಯಿಯರ್ ಆಫ್ ಚಾಲೆಂಜ್ ( 1966-69), ದಿ ಯಿಯರ್ಸ್ ಆಫ್ ಎಂಡೆವಿಯರ್ ( 1069-72) ಇಂಡಿಯಾ (ಲಂಡನ್) (1095), ‘ಇಂಡೆ ( ಲಾವುಸಾನೆ) (1979) ಮತ್ತಿತರ ಭಾಷಣ ಮತ್ತು ಬರಹಗಳ ಸಂಗ್ರಹ ಅವರ ಪ್ರಸಿದ್ಧ ಪ್ರಕಟಣೆಯನ್ನು ಸೇರಿವೆ. ಶ್ರೀಮತಿ ಗಾಂಧಿ ಅವರು ಭಾರತ ಮತ್ತು ಪ್ರಪಂಚದೆಲ್ಲೆಡೆ ಸಾಕಷ್ಟು ಪ್ರಯಾಣ ಕೈಗೊಂಡವರು. ಅಫ್ಘಾನಿಸ್ಥಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಚೀನಾ, ಶ್ರೀಲಂಕಾ ಮತ್ತು ಬರ್ಮಾಗಳಂತಹ ನೆರೆ ರಾಜ್ಯಗಳಿಗೂ ಅವರು ಭೇಟಿ ನೀಡಿದ್ದರು. ಫ್ರಾನ್ಸ್, ಜರ್ಮನ್ ಪ್ರಜಾಪ್ರಭುತ್ವ ಗಣರಾಜ್ಯ, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಗಯಾನಾ, ಹಂಗೇರಿ, ಇರಾನ್, ಇರಾಕ್ ಮತ್ತು ಇಟೆಲಿ ರಾಷ್ಟ್ರಗಳಿಗೆ ಅಧಿಕೃತ ಭೇಟಿ ನೀಡಿದರು. ಅಲ್ಜಿರಿಯಾ, ಅರ್ಜೆಂಟಿನಾ, ಆಸ್ಟ್ರೆಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಬ್ರೆಜಿಲ್, ಬಲ್ಗೆರಿಯಾ, ಕೆನಡಾ, ಚಿಲಿ, ಜೆಕೊಸ್ಲಾವೆಕಿಯಾ, ಬೊಲಿವಿಯಾ ಮತ್ತು ಈಜಿಪ್ಟ್ಗಳಂತಹ ಅತ್ಯಧಿಕ ರಾಷ್ಟ್ರಗಳಿಗೆ ಭೇಟಿ ಮಾಡಿದವರಲ್ಲಿ ಶ್ರೀಮತಿ ಇಂದಿರಾ ಗಾಂಧಿ ಒಬ್ಬರು. ಇಂಡೊನೇಶ್ಯಾ, ಜಪಾನ್, ಜಮೈಕಾ, ಕೆನ್ಯಾ, ಮಲೆಷ್ಯಾ, ಮಾರಿಷಸ್, ಮೆಕ್ಸಿಕೊ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್ ನೈಜಿರಿಯಾ, ಒಮನ್, ಪೋಲ್ಯಾಂಡ್, ರುಮಾನಿಯಾ, ಸಿಂಗಾಪುರ್, ಸ್ವಿಟ್ಜರ್ಲ್ಯಾಂಡ್, ಸಿರಿಯಾ, ಸ್ವಿಡನ್, ತಾಂಜೆನಿಯಾ, ಥಯ್ಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೋಗಳಂತಹ ಅಮೆರಿಕನ್, ಯುರೋಪಿಯನ್ ಮತ್ತು ಏಷ್ಯಾ ರಾಷ್ಟ್ರಗಳಿಗೆ ಇವರು ಭೇಟಿ ನೀಡಿದರು. ವಿಶ್ವ ಸಂಸ್ಥೆಯ ಮುಖ್ಯ ಕಛೇರಿಗೂ ಅವರು ಭೇಟಿ ನೀಡಿದರು.

Advertisements
Standard

ಶಾಸಕ ಕೆ.ಬಿ ಪ್ರಸನ್ನಕುಮಾರ್ ಮೇಲೆ ಬಿಜೆಪಿಗರೆಸೆದಿದ್ದು ಠುಸ್ ಪಟಾಕಿ, ಬಿಜೆಪಿ ಗೆ ತೀವ್ರ ಮುಖ ಭಂಗ 


ಟಿಪ್ಪು ಸುಲ್ತಾನ್ ಜಯಂತಿಯ ದಿನದಂದು ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ಮಾಡಿದ ಭಾಷಣದಲ್ಲಿ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದರು ಎಂದು ಪುಕಾರೆಬ್ಬಿಸಿ ರಾಜಕೀಯ ಲಾಭಕ್ಕಾಗಿ ದಲಿತ ಸಮುದಾಯಗಳ ಮುಂದೆ ಮೊಸುಳೆ ಕಣ್ಣೀರಿಡುತ್ತಿರುವ ಕೆ.ಎಸ್ ಈಶ್ವರಪ್ಪನವರ ಬೆಂಗಾವಲು ಪಡೆ ದೂರು ನೀಡುವುದು, ಪ್ರತಿಭಟನೆಗಿಳಿದಿರುವುದು ನೋಡಿದರೇ ಅತ್ಯಂತ ನಾಚಿಕೇಗೇಡಿನ ಪರಮಾವಧಿಯಾಗಿದೆ, ಕೆ,ಎಸ್ ಈಶ್ವರಪ್ಪನವರು ಮೂರು ಭಾರಿ ಈ ಕ್ಷೇತ್ರದ ಶಾಸಕರಾಗಿ ಆಯ್ಜೆಯಾಗಿ ಕಿಸಿದಿದ್ದೇನು..? ಇದೇ ದಲಿತ ಸಮುದಾಯಕ್ಕೆ ನೀಡಿದ ಕೊಡುಗೆಗಳೇನು..? ಎನ್ನುವ ಸಾಮಾಜಿಕ ಲೆಕ್ಕಾಚಾರಗಳಲ್ಲಿ ಒಂದಂಕಿ ಪಡೆದು ಪಾಸಾಗದ ನಪಾಸಿನ ಕೆ.ಎಸ್ ಈಶ್ವರಪ್ಪ ದಲಿತ ಸಮುದಾಯದ ಪತ್ರಿಕೆಯೊಂದರ ಮೇಲೆ ನಡೆಸಿದ ಇಲ್ಲೀಗಲ್ ದಾಳಿ ಹಾಗೂ ಜೂನ್ ೨೦೦೯ ರಂದು ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್.ಈಶ್ವಪ್ಪನವರು ಬೆಳಗ್ಗೆ ೭.೪೫ರ ಸಮಯದಲ್ಲಿ ಮೀನಾಕ್ಷಿ ಭವನದ ಹತ್ತಿರದಲ್ಲಿರುವ “ಫ್ರೆಂಡ್ಸ್ ಬ್ಯಾಡ್ಮಿಂಟನ್” ಕ್ಲಬ್‌ಗೆ ಇದೇ ಸಂಪಾದಕರೋರ್ವರನ್ನು ಕುರಿತು ಒಂದೇ ಸಮನೆ ಬೈಯುವುದಕ್ಕೆ ಶುರು ಮಾಡಿದ್ದಲ್ಲದೇ ನಿನ್ನ ಪೆನ್ನು ಇರೋದು ನನ್ನ ಮೇಲೆ ಬರೆಯುವುದಕ್ಕಲ್ಲ ಹುಷಾರ್ ನಿನಗೆ ಪೋಲಿಸರನ್ನು ಬೇಟೆ ನಾಯಿಗಳಂತೆ ಬಿಟ್ಟು ಬೇಟೆ ಮಾಡಿಸುತ್ತಿದ್ದೆ. ಆದ್ರೆ ನಮ್ ಹುಡ್ಗ ಏನ್ನೋ ಕಾರಣಕ್ಕೆ ಬಿಟ್ಟಿದ್ದೇನೆ. ಹೋಗಿ ಬದ್ಕೋ.. ಎಂಬುದಾಗಿ ಜೀವಬೆದರಿಯೊಡ್ಡಿದ್ದರು. ಇದರ ವಿರುದ್ದ ನೂರಾರು ಬೈಕ್ ರ‍್ಯಾಲಿಗಳ ಮುಖೇನ ಪ್ರತಿಭಟಿಸಿ ಅಂದಿನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಪ್ರತಿ ಅದಕ್ಕೆ ಸಂಭಂದಿಸಿದ ಆಡಿಯೋ ರೆಕಾರ್ಡ್ ಇದೀಗಲೂ ಸಾಕ್ಷಿಕರಿಸುತ್ತವೆ. ಇಂತಹ ಬಹುತೇಕ ದಲಿತ ವಿರೋದಿ ನೀತಿಯನ್ನು ಅನುಸರಿಸಿಕೊಂಡೇ ರಾಜಕೀಯ ಮಸಣ ಸೇರುತ್ತಿರುವ ಕೆ.ಎಸ್ ಈಶ್ವರಪ್ಪನವರು ಯಾವ ಪುರುಷಾರ್ಥಕ್ಕಾಗಿ ದಲಿತರ ಸೂರುಗಳ ಮುಂದೆ ಮೊಸುಳೆ ಕಣ್ಣೀರಿಡುವುದಕ್ಕೆ ಶುರುವಿಟ್ಟಿರುವುದನ್ನು ಅವಲೋಕಿಸಿದರೇ ೨೦೧೮ರ ಅಸೆಂಬ್ಲಿ ಚುನಾವಣೆಯ ಗಿಮಿಕ್ ಎಂದು ದೃಡಪಡುತ್ತಿದೆ ಈ ನಿಟ್ಟಿನಲ್ಲಿ ಸೋಮವಾರ ಬೆಳಿಗ್ಗೆ ಬಿಜೆಪಿಗರ ನಾಟಕೀಯ ವರ್ತನೆಗಳ ವಿರುದ್ದ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿರುವ ವರದಿ ಇಂತಿದೆ.


ಟಿಪ್ಪು ಸುಲ್ತಾನ್ ಜಯಂತಿಯ ಸರಕಾರಿ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ಮಾಡಿದ ಭಾಷಣದಲ್ಲಿ ಉವಾಚಿಸಿದ ಹೇಳಿಕೆಗೂ ಬಿಜೆಪಿಯವರು ದೂರು ನೀಡಿರುವ ವಿಚಾರಕ್ಕೂ ಯಾವುದೇ ಸಂಭಂದವಿಲ್ಲ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ದೇಶದ ಐತಿಹಾಸಿಕ ಘಟನೆಗಳನ್ನು ಯಥಾವತ್ತಾಗಿ ಹೇಳಿದ್ದಾರೆ ವಿನಃ ದಲಿತ ಸಮುದಾಯಕ್ಕೆ ನೋವುಂಟು ಮಾಡಿರುವ ಯಾವುದೇ ಹೇಳಿಕೆಂiiನ್ನು ನೀಡಿರುವುದಿಲ್ಲ ಅವರ ನೈಜ ಹೇಳಿಕೆಯನ್ನು ತಿರುಚಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವ ರಾಜಕೀಯ ಪ್ರೇರಿತ ಕುತ್ಸಿತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಎಸ್ಸಿ.ಎಸ್ಟಿ ಕಾಂಗ್ರೆಸ್ ಘಟಕದ ಮುಖಂಡರು ಹೇಳಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯವರ ಈ ನಡುವಳಿಕೆಯನ್ನು ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಇಡೀ ಸಮುದಾಯವೂ ತೀವ್ರವಾಗಿ ಖಂಡಿಸುತ್ತದೆ ದಲಿತ ಮಹಿಳೆಯರ ಪರವಾಗಿ ಇದೀಗ ಧ್ವನಿ ಎತ್ತುತ್ತಿರುವ ಬಿಜೆಪಿಯೂ ಮಾಜೀ ಶಾಸಕ ಹಾಗೂ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಶ್ರೀಮಂತ ಕೂಳಗಳೊಂದಿಗೆ ಶಾಮೀಲಾಗಿ ನಗರದ ಹೃದಯ ಭಾಗದಲ್ಲಿರುವ ಪಂಚವಟಿ ಕಾಲೋನಿಯ ದಲಿತರ ನೂರಕ್ಕೂ ಹೆಚ್ಚು ಕುಟುಂಬಗಳನ್ನು ರಾತ್ರೋ ರಾತ್ರಿ ಪೊಲೀಸರ ಬೆಂಗಾವಲಿನಲ್ಲಿ ಒಕ್ಕೆಲೆಬ್ಬಿಸಿರುವುದು ಇನ್ನೂ ಹಸಿ ಹಸಿಯಾಗಿಯೇ ಇದೆ ಸೂರು ಕಳೆದುಕೊಂಡ ಅನೇಕ ಮಂದಿಗಳ ಗೋಳು ದಲಿತರಿನ್ನೂ ಮರೆತಿಲ್ಲ. ಎಂದು ಅವರು ಹೇಳಿದ್ದಾರಲ್ಲದೇಇವರ ಅಧಿಕಾರವದಿಯಲ್ಲಿ ಶಿವಮೊಗ್ಗ ನಗರದಲ್ಲಿ ಯಾವ ದಲಿತರಿಗೂ ರಾಜಕೀಯವಾಗಿ ಬೆಳೆಸಲಿಲ್ಲ ಆಗ ಅವರ ಅವಧಿಯಲ್ಲಿ ನಗರಸಭೆ ಹಾಗೂ ಸೂಡಾ ಸಂಸ್ಥೆಗಳಲ್ಲಿ ಅಧ್ಯಕ್ಷರನ್ನಾಗಿ ಮಾಡಲಿಲ್ಲ ಆದರೇ ನಮ್ಮ ಶಾಸಕರು ತಮ್ಮ ಅವಧಿಯಲ್ಲಿ ಮಹಾಪೌರರು, ಉಪಮಹಾಪೌರರು ಹಾಗೂ ದಲಿತ ಮಹಿಳೆಯರಿಗೆ ರೋಸ್ಟರ್ ಬದಲಾಯಿಸದೇ ದೊರಕಿಸಿಕೊಟ್ಟಿರುತ್ತಾರೆ. ದಲಿತ ಮಹಿಳೆಯಾದಂತಹ ಮಂಗಳ ಅಣ್ಣಪ್ಪನವರಿಗೆ ಮಹಾ ಪೌರರ ಸ್ಥಾನದ ಗೌರವ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆಂದು ತಿಳಿಸಿದರು. 

ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಎಲ್ಲಾ ವರ್ಗದವರಿಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ಇಂದಿಗೂ ನ್ಯಾಯಯುತವಾಗಿ ಅತ್ಯಂತ ಸಮಾಜಪರ ಕಾಳಜಿಯೊಂದಿಗೆ ಶ್ರಮಿಸುತ್ತಿದ್ದಾರೆ. ಮೀಸಲಾತಿಯನ್ನು ಬದಲಾಯಿಸದೇ ಪರಿಶಿಷ್ಠ ಪಂಗಡದ ಮಹಿಳೆಗೆ ಉಪ ಮಹಾಪೌರರು ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ, ಈ ಹಿಂದೆ ಬಿಜೆಪಿಯ ಆಡಳಿತಾವಧಿಯಲ್ಲಿ ದಲಿತರಿಗೆ ಯಾವುದೇ ಸ್ಥಾನಮಾನ ನೀಡದೇ ದಲಿತರ ಅನರ್ಹರೆಂದು ಅವರ ಕುಟುಂಬದವರಿಗೆ ಕೆ.ಎಸ್ ಈಶ್ವರಪ್ಪನವರ ಅಣ್ಣನವರಾದ ದಿವಂಗತ ಗಂಗಾಧರಪ್ಪನವರನ್ನು ನಗರಸಭಾ ಅಧ್ಯಕ್ಷರನ್ನಾಗಿ ಮಾಡಿ ಮೇಲು ವರ್ಗದವರನ್ನೇ ಮತ್ತೇ ಮತ್ತೇ ನೇಮಕ ಮಾಡಿರುವ ಇವರಿಗೆ ಇದೀಗ ಏಕಾ ಏಕಿ ದಲಿತರ ಬಗ್ಗೆ ವಿಶೇಷ ಕಾಳಜಿ ಬಂದಿರುವುದು ಆಶ್ಚರ್ಯಕರವಾಗಿದೆ ಎಂದು ವಿವಿರಿಸಿದರು.

ಕೇಂದ್ರದಲ್ಲಿ ಬಿಜೆಪಿಯ ಸರಕಾರ ಬಂದಾಗಿನಿಂದಲೂ ಇದುವರೆಗೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿರುವುದು ಇತ್ತೀಚೆಗೆ ಕೇಂದ್ರದ ರಾಷ್ಟ್ರೀಯ ಕ್ರೈಂ ರಿಪೋರ್ಟ್ ಬ್ಯುರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ


ದೇಶದ ಇತಿಹಾಸದ ಗಂಧ ಗಾಳಿಯೇ ಗೊತ್ತಿಲ್ಲದವರು ಸುಖಾ ಸುಮ್ಮನೇ ಆರೋಪ ಮಾಡುತ್ತಿರುವ ರಾಜಕೀಯ ನಿರುದ್ಯೋಗಿಗಳು ತಮ್ಮ ಅವರ ಅಧಿಕಾರ ಅವಧಿಯಲ್ಲಿ ಏನನ್ನೂ ಮಾಡದೇ ಇದೀಗ ತೋರುತ್ತಿರುವ ಕಪಟ ದಲಿತಪರ ಕಾಳಜಿ ಹಾಸ್ಯಾಸ್ಪದವಾಗಿದೆ.

ಪ್ರಸ್ತುತ ಸರಕಾರದ ಅವಧಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಕೆ.ಬಿ ಪ್ರಸನ್ನಕುಮಾರ್ ಈ ಹಿಂದೆ ಯಾರು ಮಾಡದಂತಹ ದಲಿತಪರ ಅಭಿವೃದ್ದಿ ಕೆಲಸಗಳನ್ನು ಅವರು ಮಾಡಿರುವುದು ಇಂದು ಸಾಕ್ಷ್ಯವಾಗಿದೆ.ಶಿವಮೊಗ್ಗ ನಗರದ ಪ್ರತಿ ದಲಿತ ಏರಿಯಾಗಳಲ್ಲಿ ಕಳೆದ ಇಪ್ಪತ್ತು ವರುಷದಿಂದ ಮಾಡದ ಅಭಿವೃದ್ದಿಯನ್ನು ಶಾಸಕರಾದ ಕೆ.ಬಿ ಪ್ರಸನ್ನಕುಮಾರ್‌ರವರು ನಾಲ್ಕು ವರುಷಗಳಲ್ಲಿ ಮಾಡಿ ತೋರಿಸಿದ್ದಾರೆ.

ಇಂತಹ ಕ್ರೀಯಾಶೀಲ ಶಾಸಕರ ಮೇಲೆ ಸಲ್ಲದ ಆರೋಪಗಳನ್ನು ಮಾಡುತ್ತಾ ಸಮಾಜದ ಜನತೆಗೆ ದಾರಿ ತಪ್ಪಿಸುತ್ತಿರುವುದನ್ನು ಎಸ್ಸಿ.ಎಸ್ಟಿ ಕಾಂಗ್ರೆಸ್ ಘಟಕ ಖಂಡಿಸಿದೆ.

 

Standard

ಪ್ರಧಾನಿ ಮೋದಿ: ಮಾತು ಮತ್ತು ಕೃತಿ


ಎಲ್ಲರಿಗೂ ‘ಅಚ್ಛೇ ದಿನ್’ ತಂದುಕೊಡುತ್ತೇವೆ ಎಂದು ಚುನಾವಣೆಗೆ ಮೊದಲು ಭರವಸೆ ಕೊಟ್ಟ ಪ್ರಧಾನಿ ಮೋದಿ ಅದನ್ನು ಕೇವಲ ಕೆಲವು ಕಾರ್ಪೊರೇಟ್ ಕುಳಗಳಿಗೆ ಮಾತ್ರ ಸೀಮಿತಗೊಳಿಸಿ ಮಿಕ್ಕವರೆಲ್ಲಾ ಭಿಕ್ಷಾಪಾತ್ರೆ ಹಿಡಿಯಬೇಕಾದ ಕೆಟ್ಟ ದಿನಗಳನ್ನು ತಂದುಕೊಟ್ಟಿರುವ ವಾಸ್ತವ ಇಂದು ನಮ್ಮೆಲ್ಲರ ಮುಂದಿದೆ. ತಮ್ಮನ್ನು ಚುನಾಯಿಸಿದರೆ ಭ್ರಷ್ಟಾಚಾರವನ್ನು ನಿರ್ನಾಮಗೊಳಿಸುವೆವು, ವಿದೇಶಗಳಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬನಿಗೂ ರೂ.15 ಲಕ್ಷ ಹಂಚುವೆವೆಂದು ಭರವಸೆ ಕೊಟ್ಟಿದ್ದ ಮೋದೀಜಿಯ ಸರಕಾರ ಅಸಲಿಗೆ ಇಂದು ವಿದೇಶದಲ್ಲಿರುವ ಕಪ್ಪುಹಣ ಬಿಡಿ, ಸ್ವದೇಶದಲ್ಲಿರುವ ಕಪ್ಪುಹಣವನ್ನು ಪತ್ತೆ ಹಚ್ಚುವಲ್ಲಿಯೂ ದಯನೀಯವಾಗಿ ಸೋತಿದೆ.
ಕಳೆದ ವರ್ಷ ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಕಾಲದಲ್ಲಿ ಸನ್ಮಾನ್ಯರು ಏನು ಹೇಳಿದ್ದರು? ‘ಕಾಳದಂಧೆಕೋರರನ್ನು ಜೈಲಿಗಟ್ಟುವ ಮಾರ್ಗವೊಂದನ್ನು ಕಂಡುಕೊಳ್ಳುವೆ’. ಮಾರ್ಗ ಸಿಕ್ಕಿತೇ ಎಂದು ಕೊರಳುದ್ದ ಮಾಡಿದವರಿಗೆ ನಿರಾಸೆ ಕಾದಿದೆ. ಏಕೆಂದರೆ ಎಷ್ಟು ಕಾಳದಂಧೆಕೋರರ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಇತ್ತೀಚೆಗಷ್ಟೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಒಂದೂ ಇಲ್ಲ ಎಂಬ ಉತ್ತರ ಸಿಕ್ಕಿದೆ! ಹೋಗಲಿ, ಜೇಬಿಗೆ ಕಪ್ಪುಹಣ ಬೀಳದಿದ್ದರೂ ಪರವಾಗಿಲ್ಲ ಎಂದುಕೊಂಡರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆಯ ವಸ್ತುಗಳು ಇತ್ಯಾದಿಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ಏರಿಸುವ ಮೂಲಕ ಪ್ರಜೆಗಳ ಜೇಬಿಗೇ ಕತ್ತರಿ ಹಾಕುವ ಕೆಲಸ ಪ್ರಾರಂಭವಾಗಿದೆ! ಕಾರ್ಪೊರೇಟುಗಳು ಬ್ಯಾಂಕುಗಳಿಂದ ಸಾಲ ಪಡೆದು ವಾಪಸ್ ಮಾಡದ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಅಂತಿಮವಾಗಿ ಪ್ರಜೆಗಳಿಂದಲೇ ಸಂಗ್ರಹಿಸಲಾಗುತ್ತಿದೆ! ಯಾವುದೇ ರಾಜಕೀಯ ಪಕ್ಷ ಇರಲಿ, ಅದರ ಕಾರ್ಯನೀತಿಗಳು, ಅದರ ಯೋಜನೆಗಳು ಮುಂತಾದವುಗಳ ಬಗ್ಗೆ ಅದರೊಳಗೇ ಟೀಕೆಗಳು ಮತ್ತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುವುದು ಒಂದು ಸಹಜ ಪ್ರಕ್ರಿಯೆಯಾಗಿದೆ.
ಯಾವುದೇ ವಿಷಯದ ಬಗ್ಗೆ ಸಂಪೂರ್ಣ ಏಕಮತ ನಿರೀಕ್ಷಿಸುವುದು ಪ್ರಜಾತಾಂತ್ರಿಕವಲ್ಲ, ಅದು ಮಿಲಿಟರಿ ಶಿಸ್ತು. ಆದರೆ ನಮ್ಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೇ ಸೇನೆಯ ಶಿಸ್ತು ಬೇಕಾಗಿರುವಂತೆ ಕಾಣುತ್ತದೆ. ಮೊನ್ನೆ ಅಕ್ಟೋಬರ್ 28ರಂದು ಹೊಸದಿಲ್ಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ‘ದಿವಾಲಿ ಮಿಲನ್’ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಮಾನ್ಯರು, ಬಿಜೆಪಿಯೊಳಗಿಂದ ಭಿನ್ನ ಧ್ವನಿಗಳು ಹೊರಬೀಳುತ್ತಿವೆ ಎನ್ನುವ ಮೂಲಕ ಪಕ್ಷದ ಸದಸ್ಯರಿಗೆ ನಯವಾದ ಎಚ್ಚರಿಕೆಯೊಂದನ್ನು ನೀಡಿದರು. ಇದೇ ವೇಳೆ ಭಾರತದ ರಾಜಕೀಯ ಪಕ್ಷಗಳೆಲ್ಲ ಆಂತರಿಕ ಪ್ರಜಾಪ್ರಭುತ್ವದ ಕುರಿತು ಚರ್ಚೆ ನಡೆಸುವಂತೆಯೂ ಕರೆಕೊಟ್ಟರು. ಅಂತಹ ‘ನೈಜ ಪ್ರಜಾತಾಂತ್ರಿಕ ಕೆಚ್ಚನ್ನು’ ಬೆಳೆಸುವುದು ದೇಶದ ಭವಿಷ್ಯಕ್ಕೆ ಆವಶ್ಯಕವೆಂದು ಒತ್ತಿಹೇಳಿದರು. ಆದರೆ ನೋಟು ರದ್ದತಿ ಮತ್ತು ಜಿಎಸ್‌ಟಿ ಯೋಜನೆಗಳ ಕುರಿತು ಇತ್ತೀಚೆಗೆ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಮಾಡಿದಂತಹ ಮಿದು ಟೀಕೆಗಳನ್ನು ಸಹಿಸಲಾರದ ಸನ್ಮಾನ್ಯರು ಅವರಿಬ್ಬರನ್ನು ‘80ರ ಹರೆಯದ ಹತಾಶ ಉದ್ಯೋಗಾಕಾಂಕ್ಷಿಗಳು’ ಎಂದು ಗೇಲಿ ಮಾಡಿರುವುದು ಮೋದಿಯ ಮಾತು ಮತ್ತು ಕೃತಿಗಳ ನಡುವಿನ ಅಜಗಜಾಂತರವನ್ನು ಎತ್ತಿ ತೋರಿಸುತ್ತದೆ.
‘ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ಕುರಿತು ಆಗಾಗ ಚರ್ಚೆಗಳಾಗುತ್ತವೆ; ಆದರೆ ಅವುಗಳ ವೌಲ್ಯಗಳು, ಆಂತರಿಕ ಪ್ರಜಾಪ್ರಭುತ್ವ ಮತ್ತು ಹೊಸ ತಲೆಮಾರಿನವರಿಗೆ ಅವಕಾಶ ಒದಗಿಸುವ ಕುರಿತು ಯಾರೂ ಮಾತನಾಡುತ್ತಿಲ್ಲ’ ಎಂಬ ಮೋದಿಯ ಮತ್ತೊಂದು ಕಂಪ್ಲೇಂಟ್‌ಗೆ ಜನ ನಗದೆ ಇನ್ನೇನು ಮಾಡಬೇಕು! ಏಕೆಂದರೆ ನಗದುರಹಿತ ವಹಿವಾಟು ಹೆಚ್ಚಬೇಕೆಂದು ಹೇಳುವ ಮೋದೀಜಿ ರಾಜಕೀಯ ಪಕ್ಷಗಳ ದೇಣಿಗೆಯನ್ನು ಯಾಕೆ ಸಂಪೂರ್ಣ ನಗದುರಹಿತ ಮಾಡಿಲ್ಲ? ಹುಟ್ಟಿನಿಂದ ಸಾವಿನ ತನಕ ಎಲ್ಲದಕ್ಕೂ ಆಧಾರ್ ಜೋಡಣೆ ಮಾಡಬೇಕು ಎನ್ನುವವರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರಿಗೆ ಆಧಾರ್ ಜೋಡಣೆ ಯಾಕೆ ಕಡ್ಡಾಯ ಮಾಡಿಲ್ಲ? ಇದರ ಹಿಂದೆ ಯಾವ ಮತ್ಲಬ್ ಅಡಗಿದೆ ಎಂಬುದನ್ನು ಜನ ಬಹಳ ಚೆನ್ನಾಗಿ ಅರಿತುಕೊಂಡಿದ್ದಾರೆ. ಇನ್ನು ಹೊಸ ತಲೆಮಾರಿನವರಿಗೆ ಅವಕಾಶ ಒದಗಿಸುವ ವಿಷಯಕ್ಕೆ ಬಂದರೆ ಗುಜರಾತಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೇ ರಾಜ್ಯ ಮಟ್ಟಕ್ಕೆ ಏರಿಸಿದವರು ಇನ್ಯಾರೂ ಅಲ್ಲ, ಇದೇ ಮೋದೀಜಿ!
ಇದೇ ನವೆಂಬರ್ 6ರಂದು ಪತ್ರಿಕೆಯೊಂದರ 75ನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಸನ್ಮಾನ್ಯರು, ಮಹಾತ್ಮ ಗಾಂಧಿಯವರನ್ನು ಉಲ್ಲೇಖಿಸುತ್ತಾ, ಪತ್ರಿಕಾ ಸ್ವಾತಂತ್ರದ ದುರ್ಬಳಕೆ ಕ್ರಿಮಿನಲ್ ಕೃತ್ಯ; ಬರೆಯುವ ಸ್ವಾತಂತ್ರದಲ್ಲಿ ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು ಪ್ರಕಟಿಸುವ ಸ್ವಾತಂತ್ರ ಸೇರಿಲ್ಲ ಎಂದು ಮುಂತಾದ ಹತ್ತು ಹಲವು ಪುಕ್ಕಟೆ ಸಲಹೆಗಳನ್ನು ನೀಡಿದರು. ಇವು ಭಟ್ಟಂಗಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಅನ್ವಯಿಸುವುದಿಲ್ಲ ಎನ್ನಲು ಬಹುಶಃ ಮರೆತಿರಬೇಕು. ಏಕೆಂದರೆ ನಾವು ದಿನಾ ನೋಡುವಂತೆ ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು ಪ್ರಕಟಿಸುವಲ್ಲಿ ಭಟ್ಟಂಗಿ ಮಾಧ್ಯಮಗಳು ಎಲ್ಲರಿಗಿಂತ ಮುಂಚೂಣಿಯಲ್ಲಿವೆ! ಇನ್ನೊಂದು ಕಡೆ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯವರ ಸಹ ಸ್ವಯಂಸೇವಕರು ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು (ಮತ್ತು ಕೆಟ್ಟಕೆಟ್ಟದಾದ ಬೈಗುಳಗಳನ್ನು) ಹರಿಬಿಡುತ್ತಿದ್ದರೆ ಸನ್ಮಾನ್ಯರು ಅದನ್ನೆಲ್ಲ ತಡೆಯುವ ಬದಲು ಫಾಲೋ ಮಾಡುತ್ತಾರೆ! ಅರುಣ್ ಶೌರಿ ಸರಿಯಾಗಿಯೇ ಹೇಳಿದ್ದಾರೆ.
ಬರೀ ಎರಡೂವರೆ ಮಂದಿಯ (ಮೋದಿ, ಅಮಿತ್ ಶಾ ಮತ್ತು ಒಬ್ಬ ಲಾಯರ್) ಆಡಳಿತವಾಗಿ ಪರಿಣಮಿಸಿರುವ ಮೋದಿ ಸರಕಾರದಲ್ಲಿ ನೈಜ ಪ್ರಜಾಪ್ರಭುತ್ವ ಎಲ್ಲಿದೆ? ಪ್ರಶ್ನಿಸುವವರನ್ನು, ಟೀಕಿಸುವವರನ್ನು ಹಿಗ್ಗಾಮುಗ್ಗಾ ಬಯ್ಯುವುದೇ ಮೋದಿ ಸರಕಾರ ಹಾಗೂ ಅದರ ತುತ್ತೂರಿವಾಲಾಗಳ ಮಾಮೂಲಿ ಕಾಯಕವಾಗಿದೆ! ಜನರು ತಿಳಿದುಕೊಳ್ಳಬೇಕಾದ ವಾಸ್ತವ ಏನೆಂದರೆ ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿ ತೋರಿಕೆಗೆ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದಾದರೂ ಅದು ಆರಂಭದಿಂದಲೂ ಸರ್ವಾಧಿಕಾರವನ್ನು ಪ್ರತಿಪಾದಿಸುತ್ತಾ ಬಂದಿರುವ ಪಕ್ಷ. ಇಂತಹ ಪಕ್ಷದಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಅವಕಾಶ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಟೀಕೆ, ಭಿನ್ನಾಭಿಪ್ರಾಯಗಳಿಗೆ ಅವಕಾಶ ಒದಗಿಸುವ ಪ್ರಶ್ನೆ ಎಲ್ಲಿಂದ ಬಂತು?
ಜನತೆಗೆ ಉತ್ತರದಾಯಿಯಾಗಿರುವ ಪ್ರಜಾತಾಂತ್ರಿಕ ಸರಕಾರವೊಂದರಲ್ಲಿ ಪ್ರಾಮುಖ್ಯತೆಯ ಮಟ್ಟಿಗೆ ಮೊದಲು ಸರಕಾರ, ನಂತರ ಪಕ್ಷ, ಕೊನೆಯಲ್ಲಿ ನಾಯಕ ಎಂದಿರಬೇಕು. ಆದರೆ ಮೋದಿ ಸರಕಾರದಲ್ಲಿ ಪ್ರಾಮುಖ್ಯತೆ ಕೇವಲ ಮೋದಿಗೆ. ಆತ, ಆತನ ಸರಕಾರ, ಆತನ ಪಕ್ಷ ಸೇರಿದಂತೆ ಎಲ್ಲವೂ ಉತ್ತರದಾಯಿಯಾಗಿರುವುದು ನಾಗಪುರದಲ್ಲಿರುವ ಅಸಾಂವಿಧಾನಿಕ ಗುರುವಿಗೆ. ಇದು ಆರೆಸ್ಸೆಸ್‌ನ ಮಾಜಿ ಗುರು ಗೋಳ್ವಲ್ಕರ್ ಹಾಕಿಕೊಟ್ಟ ಅನುಲ್ಲಂಘನೀಯ ಪರಂಪರೆಗೆ ಅನುಸಾರವಾಗಿದೆ. ತನ್ನ ಸಂಘಟನೆಯ ವಿನ್ಯಾಸ ಮತ್ತು ಗುರಿಯನ್ನು ಆತ 1940ರಲ್ಲೇ ವಿಷದಪಡಿಸಿದ್ದಾರೆ. ಅಂದು ಮದ್ರಾಸ್‌ನಲ್ಲಿ 1350 ಉನ್ನತಮಟ್ಟದ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಳ್ವಲ್ಕರ್ ‘‘ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಪ್ರತಿಯೊಂದು ಮೂಲೆಯಲ್ಲೂ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ’’ ಎಂದು ಸ್ಪಷ್ಟವಾಗಿ ಹೇಳಿದರು. (ಎಂ.ಎಸ್.ಗೋಳ್ವಲ್ಕರ್, ಶ್ರೀ ಗುರೂಜಿ ಸಮಗ್ರ ದರ್ಶನ್ ಸಂಪುಟ 1, ಪುಟ 11).
ಆರೆಸ್ಸೆಸ್‌ನ ರಾಜಕೀಯ ಉಪಶಾಖೆಯಾದ ಬಿಜೆಪಿಗೆ (1951ರಲ್ಲಿ ಸ್ಥಾಪನೆಯಾದ ಜನಸಂಘ ಇದರ ಹಳೆ ಅವತಾರ) ಸ್ವಯಂಸೇವಕರನ್ನು ಎರವಲು ನೀಡುವ ಐಡಿಯಾ ಗೋಳ್ವಲ್ಕರ್‌ರದು. ಅಂಥವರನ್ನು ಆತ ಆರೆಸ್ಸೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗಿರುವ ‘ನಟ’ರೆಂದು ಕರೆಯುತ್ತಾರೆ. 1954ರ ಮಾರ್ಚ್ 16ರಂದು ವಾರ್ಧಾದ ಸಿಂಡಿಯಲ್ಲಿ ಮಾಡಿದ ಭಾಷಣದ ವೇಳೆ ಗೋಳ್ವಲ್ಕರ್ ಏನು ಹೇಳಿದರೆಂಬುದನ್ನು ಗಮನಿಸಿ: ‘‘ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ. ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ…….
ಉದಾಹರಣೆಗೆ ನಮ್ಮ ಕೆಲವು ಮಿತ್ರರಿಗೆ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಲಾಯಿತು. ಇದರರ್ಥ ಅವರಿಗೆ ರಾಜಕೀಯದಲ್ಲಿ ಭಾರೀ ಆಸಕ್ತಿ ಇದೆ ಅಥವಾ ಪ್ರೇರೇಪಣೆಯಿದೆ ಎಂದಲ್ಲ. ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣತ್ಯಾಗ ಮಾಡುವುದಿಲ್ಲ. ರಾಜಕೀಯದಿಂದ ಹೊರಬರುವಂತೆ ಹೇಳಿದರೆ ಅದಕ್ಕೂ ಅವರ ಆಕ್ಷೇಪವಿಲ್ಲ. ಅವರಿಗೆ ವಿವೇಚನಾ ಶಕ್ತಿ ಬೇಕಾಗಿಯೇ ಇಲ್ಲ ’’ (ಶ್ರೀ ಗುರೂಜಿ ಸಮಗ್ರ ದರ್ಶನ್, ಸಂಪುಟ 3, ಪುಟ 32). ಇನ್ನೊಂದು ಸಂದರ್ಭದಲ್ಲಿ ಗೋಳ್ವಲ್ಕರ್ ‘‘ನಮ್ಮ ಕೆಲವು ಸ್ವಯಂಸೇವಕರು ರಾಜಕೀಯದಲ್ಲಿ ದುಡಿಯುತ್ತಿದ್ದಾರೆಂಬ ವಿಷಯವೂ ನಮಗೆ ಗೊತ್ತಿದೆ. ಅಲ್ಲಿ ಅವರು ಅಗತ್ಯ ಬಿದ್ದಂತೆ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ಸಂಘಟಿಸುವ ಕೆಲಸ ಮತ್ತು ಘೋಷಣೆ ಕೂಗುವ ಕೆಲಸ ಮಾಡಬೇಕು. ಇವೆಲ್ಲವೂ ನಮ್ಮ ಕೆಲಸದ ಭಾಗವಲ್ಲ, ಆದಾಗ್ಯೂ ನಟನಿಗೆ ಯಾವ ಪಾತ್ರವನ್ನು ವಹಿಸಲಾಗುತ್ತದೊ ಅದನ್ನಾತ ತನ್ನ ಪೂರ್ತಿ ಸಾಮರ್ಥ್ಯವನ್ನು ಬಳಸಿಕೊಂಡು ನಿರ್ವಹಿಸಬೇಕು.
ವಾಸ್ತವ ಹೀಗಿರುವಾಗ ‘‘ನೈಜ ಪ್ರಜಾತಾಂತ್ರಿಕ ಕೆಚ್ಚು’’, ಆಂತರಿಕ ಪ್ರಜಾಸತ್ತೆಯ ಮಾತುಗಳೆಲ್ಲ ಪ್ರತೀ ತಿಂಗಳು ತಪ್ಪದೆ ಹೊರಬೀಳುವ ಮನ್ ಕಿ ಬಾತ್‌ನ ಹಾಗೆ ಅಪ್ಪಟ ಬೂಟಾಟಿಕೆಯ ಮಾತುಗಳೆಂಬುದು ಬಹಳ ಸ್ಪಷ್ಟ. ಒಟ್ಟಿನಲ್ಲಿ ಗುರು ಗೋಳ್ವಲ್ಕರ್‌ರ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಿರುವ ನಿಷ್ಠಾವಂತ ಸ್ವಯಂಸೇವಕ ಮೋದಿ ತನ್ನ ಅಭಿನಯ ಮತ್ತು ಮಾತುಗಾರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಮಂಕುಬೂದಿ ಎರಚುವ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಬಹುತೇಕ ಭಾರತೀಯ ಮತದಾರರ ಸಿನೆಮಾ ಹುಚ್ಚಿನ ಮನೋಸ್ಥಿತಿಯನ್ನು ಚೆನ್ನಾಗಿ ಅರಿತಿರುವ ಮೋದೀಜಿ ತನ್ನ ಅತ್ಯದ್ಭುತ ನಟನಾ ಕೌಶಲ ಮತ್ತು ಸಿನೆಮಾ ಡಯಲಾಗ್ ಥರದ ಭಾಷಣಗಳ ಮೂಲಕ ಅವರ ಮನಸೂರೆ ಮಾಡಿದ್ದಾರೆ. ಹೀರೊ ಯಾವುದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡರೂ ಕೊನೆಯಲ್ಲಿ ಡಿಶುಂ ಡಿಶುಂ ಎಂದು ವಿಲನ್‌ಗಳನ್ನೆಲ್ಲ ಮಣಿಸಿ ಜಯಶಾಲಿಯಾಗಿಬಿಡುತ್ತಾನೆ ಎಂಬ ಸಿನೆಮಾ ಕಥೆಗಳನ್ನು ನಂಬುವ, ಹೀರೋಗಳ ಆ್ಯಕ್ಷನ್, ಡಯಲಾಗ್‌ಗಳಿಗೆ ಮರುಳಾಗಿ ಸಿಳ್ಳೆ ಹಾಕುವ ಜನವರ್ಗಗಳ ದೌರ್ಬಲ್ಯವನ್ನು ಪೂರ್ತಿ ಬಳಸಿಕೊಂಡಿರುವ ಮೋದೀಜಿ ಇಂತಹ ಅಮಾಯಕ ಜನರ ಕಣ್ಣಿಗೆ ಮಣ್ಣೆರಚುವಲ್ಲಿ ಇದುವರೆಗೆ ಯಶಸ್ವಿಯಾಗಿದ್ದಾರೆ. ಈ ಸ್ಥಿತಿ ಎಂದು ಬದಲಾಗುತ್ತದೋ ಗೊತ್ತಿಲ್ಲ. 
Via Suresh

Standard

#BlackDay ನೋಟು ರದ್ದತಿಗೆ ಒಂದು ವರ್ಷ: ಜನತೆಗೆ ಮಹಾಮೋಸದ ಕರಾಳ ದಿನ ನವೆಂಬರ್ 8 

ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಧಿಡೀರನೆ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಯಿತು.ರದ್ದುಪಡಿಸುವಾಗ ಆನೇಕ ವಾಗ್ದಾನಗಳನ್ನು ದೇಶದ ಜನತೆಗೆ ನೀಡಲಾಯಿತು.ಆದೊಂದು ಆರ್ಥಿಕ ಕ್ರಾಂತಿ ಎಂದೇ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದ ವಕ್ತಾರರು ಮತ್ತು ಆದೆ ಭಾಷೆಯಲ್ಲಿ ಮಾತನಾಡುವ ಮಾಧ್ಯಮಗಳು ಬಿಂಬಿಸಿದವು.


ಅಂದಿನ ಕೆಲವು ಪತ್ರಿಕೆಗಳ ತಲೆಬರಹಗಳನ್ನು ಗಮನಿಸಿದರೆ “ಭ್ರಷ್ಟಾಚಾರದ ವಿರುದ್ಧ ಮೋದಿ ಸಮರ : ಹೆಚ್ಚು ಮುಖಬೆಲೆಯ ನೋಟುಗಳ ರದ್ದತಿ” , ” ಕಪ್ಪುಹಣದ ಮುಲಕ್ಕೆ ಪ್ರಧಾನಿ ಕೊಡಲಿಯೇಟು” ಇತ್ಯಾದಿ ದೊಡ್ಡ ದೊಡ್ಡ ಮಾತುಗಳನ್ನು ಕಾಣಬಹುದು ಆದೆ ರೀತಿ ಸಚಿವ ಅರುಣ್ ಜೈಟ್ಲೇಯವರು ಖಚಿತ ಮಾತುಗಳಲ್ಲಿ “ಹೆಚ್ಚು ಮುಖಬೆಲೆಯ ನೋಟುಗಳ ರದ್ಧತಿಯಿಂದ ಸುಮಾರು 4 ಲಕ್ಷ ಕೋಟಿ ರೂಗಳಷ್ಟು ಆದಾಯವನ್ನು ಸರ್ಕಾರ ಪಡೆಯಲಿದೆ” ಎಂದು ಹೇಳಿದ್ದರು. ಸ್ವತಃ ಪ್ರದಾನ ಮಂತ್ರಿಗಳು ದೇಶವನ್ನುದ್ದೇಶಿಸಿ ಆಡಿದ ಭಾಷಣದಲ್ಲಿ “ಕೇವಲ 50 ದಿನಗಳ ಸಮಯ ಕೂಡಿ; ನೋಟುರದ್ದತಿಯಿಂದ ಆಗಾಧವಾದ ಲಾಭಗಳಾಗಲಿವೆ.ಆಗದಿದ್ದರೆ ಬೇಕಾದರೆ ನನ್ನ ತಲೆ ಕಡಿಯಿರಿ” ಎಂದು ಭಾವನಾತ್ಮಕವಾದ ಮಾತುಗಳನ್ನು ಆಡಿದ್ದರು.ಇವೆಲ್ಲವನ್ನೂ ಧಿಗ್ಬ್ರಾಂತಿಯಲ್ಲಿ ಕೇಳಿದ ದೇಶದ ಜನತೆ ಪವಾಡದ ನಿರೀಕ್ಷೆಯಲ್ಲಿ ನೋಟು ರದ್ದತಿಯ ತಕ್ಷಣದ ಏಟುಗಳನ್ನು ಮೌನವಾಗಿ ಸಹಿಸಿದರು.ಏಟಿಎಂ ಗಳ ಮುಂದೆ ದಿನಗಟ್ಟಲೆ ಕ್ಯೂ ನಿಂತರು. ಅದೇ ಸರತಿ ಸಾಲುಗಳಲ್ಲಿ ಸುಮಾರು 150 ಮಂದಿ ಅಮಾಯಕ ನಾಗರೀಕರ ಸಾವು ಸಂಭವಿಸಿತು.​

​ನಗದಿನ ಕೊರತೆಯಿಂದ ದಿನಂಪ್ರತಿ ಹಣಹೂಡಿಕೆಯ ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿದ್ದ ಅನೇಕರು ಮತ್ತೆ ಚೇತರಿಸಿಕೊಳ್ಳಲಾರದಷ್ಟು ನಷ್ಟ ಅನುಭವಿಸಿದರು. ಅನೌಪಚಾರಿಕ ಕ್ಷೇತ್ರಗಳ ಉದ್ಯೋಗಗಳು ಕಡಿತಗೊಂಡವು.ಜನಸಾಮಾನ್ಯರಿಗಾಗುತ್ತಿರುವ ಈ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ” ನೀವು ಈ 70 ವರ್ಷಗಳಲ್ಲಿ ರೇಷನ್ ಗೆ ,ಆಸ್ಪತ್ರೆಗೆ ಎಲ್ಲದಕ್ಕೂ ಸರತಿಯಲ್ಲಿ ನಿಲ್ಲುತ್ತಲೇ ಬಂದಿದ್ದೀರಿ; ಈಗ ಮಾತ್ರ ಯಾಕೆ ಟೀಕೆ ? ಇದನ್ನು ಸಹಿಸಿಕೊಳ್ಳಿ” ಎಂಬ ಉತ್ತರ ಆಳುವವರಿಂದ ಬಂತೇ ಹೊರತು,ಸಮಸ್ಯೆಗೆ ಪರಿಹಾರ ದೊರಕಲಿಲ್ಲ.

ಇದೀಗ ಹಲವು ಪವಾಡಗಳ ವಾಗ್ದಾನ ಮಾಡಿದ್ದ ಆರ್ಥಿಕ ನೀತಿಯನ್ನು ಜಾರಿಗೊಳಿಸಿ ಸರಿಯಾಗಿ ಒಂದು ವರ್ಷವಾಗಿದೆ.ಈಗಲಾದರೂ ಕೇಂದ್ರ ಸರ್ಕಾರ ಘೋಷಿಸಿದ್ದೇನು,ದೇಶಕ್ಕೆ ದೊರಕಿದ್ದೇನು ಎಂಬುದನ್ನು ನಾವು ಬಿಡಿಸಿ ಅರಿತುಕೊಳ್ಳುವ ಅಗತ್ಯವಿದೆ.
1 . “ಕಪ್ಪು ಹಣದ ಮೇಲೆ ಭಾರಿ ಪ್ರಹಾರ” “4 ಲಕ್ಷ ಕೋಟಿ ರೂಗಳ ಆದಾಯ ದೇಶದ ಬೊಕ್ಕಸಕ್ಕೆ ಲಭಿಸಲಿದೆ “

ದೊಡ್ಡ ಮುಖಬೆಲೆಯ ನೋಟುಗಳನ್ನು ಧಿಡೀರನೆ ರದ್ದುಪಡಿಸಿದ್ದರಿಂದ ಮತ್ತು ಭಾರೀ ಮೊತ್ತದ ಅಕ್ರಮ ಹಣವನ್ನು ಸಂಗ್ರಹಿಸಿರುವವರು ಸಿಕ್ಕಿಬೀಳುವ ಭಯದಿಂದ ಅದನ್ನು ಬ್ಯಾಂಕಿಗೆ ಜಮಾ ಮಾಡುವುದಿಲ್ಲ. ಅಂತಹ ಹಣ ಸುಮಾರು 4 ಲಕ್ಷ ಕೋಟಿ ರೂಗಳಷ್ಟು ದೇಶಕ್ಕೆ ಆದಾಯವಾಗಿ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು .ಆದರೆ, ಈಗ ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ವರದಿಯಲ್ಲಿ ನೋಟು ರದ್ಧತಿಗಿಂತ ಹಿಂದೆ ದೇಶದಲ್ಲಿ ಚಲಾವಣೆಯಲ್ಲಿದ್ದುದರಲ್ಲಿ ಶೇ 99 ರಷ್ಟು ನೋಟುಗಳು ಈಗಾಗಲೇ ವಾಪಸ್ ಬಂದಿದೆ ಮತ್ತು ಎಣಿಕೆ ಕಾರ್ಯ ಇನ್ನು ನಡೆಯುತ್ತಿರುವುದರಿಂದ, ಇನ್ನುಳಿದ ನೋಟುಗಳು ಕೂಡ ಬಂದಿರಬಹುದು ಎಂದು ಹೇಳಿದೆ. ಹಾಗಾದರೆ ನೋಟು ರದ್ಧತಿಯಿಂದ ಎಷ್ಟು ಕಪ್ಪು ಹಣ ಸಿಕ್ಕಿತು? ಎಂದು ಪ್ರಶ್ನಿಸಿದರೆ ಸುಮಾರು 16000 ಕೋಟಿ ಗಳಷ್ಟು ಎಂಬ ಉತ್ತರ ದೊರೆಯುತ್ತಿದೆ.
ಹಾಗಾದರೆ ಇದು ದೇಶಕ್ಕೆ ದೊರೆತಿರುವ ಆದಾಯವೇ? ಖಂಡಿತ ಅಲ್ಲ! ಏಕೆಂದರೆ, ನೋಟು ರದ್ದತಿ ಸಂದರ್ಭದಲ್ಲಿ ದೇಶಕ್ಕೆ ಉಂಟಾದ ಹೆಚ್ಚುವರಿ ವೆಚ್ಚ ಸುಮಾರು 23000 ಕೋಟಿ ರೂಗಳು!! ಅಂದರೆ , ಈ ಕ್ರಮದಿಂದ ಒಂದೆಡೆ ಭಾರಿ ಮೊತ್ತದ ಕಪ್ಪು ಹಣವು ಬರಲಿಲ್ಲ ,ಬದಲಿಗೆ ಜನರ ಹಣದಲ್ಲಿ ಒಂದಷ್ಟು ಇದಕ್ಕಾಗಿ ಹೆಚ್ಚುವರಿ ಖರ್ಚಾಯಿತು!!!

2 . ” ಉಗ್ರಗಾಮಿಗಳಿಗೆ ಸರಬರಾಜಾಗುವ ಹಣ ನಿಲ್ಲುತ್ತದೆ : ಉಗ್ರರ ದಾಳಿಗಳು ಕಡಿಮೆಯಾಗುತ್ತವೆ”
ಉಗ್ರಗಾಮಿಗಳಿಗೆ ಹಣ ಸರಬರಾಜಾಗುವುದಕ್ಕೂ ನೋಟು ರದ್ದತಿಗೂ ಅರ್ಥತ್ ಸಂಬಂಧವಿಲ್ಲ! ಏಕೆಂದರೆ ಉಗ್ರವಾದ ಹುಟ್ಟುವುದು ರಾಜಕೀಯ ಕಾರಣಗಳಿಂದಾಗಿ. ಅಮೆರಿಕಾದಂತಹ ದೊಡ್ಡ ದೇಶಗಳೇ ಹಣ ಕೊಟ್ಟು ಓಸಾಮಾ ಬಿನ್ ಲಾಡೆನ್ ನಂತಹ ಉಗ್ರಗಾಮಿಗಳನ್ನು ಪೋಷಿಸಿದರು ಎಂಬುದು ಇವತ್ತು ಇಡೀ ವಿಶ್ವಕ್ಕೆ ಗೊತ್ತಿರುವ ಸತ್ಯ. ಹಾಗಿರುವಾಗ , ರಾಜಕೀಯ ಹಿನ್ನೆಲೆಯಿಂದ ಹುಟ್ಟುವ ಉಗ್ರವಾದಿ ಗುಂಪುಗಳಿಗೆ ಯಾವ ನೋಟು ಚಲಾವಣೆಯಲ್ಲಿರುತ್ತದೋ ಅದನ್ನು ಅವರವರ ಪೋಷಕರೇ ತಲುಪಿಸುತ್ತಾರೆ. ಭಾರತದಲ್ಲಿ ನೋಟು ರದ್ದತಿಯಾಗಿ ಹೊಸ ಎರಡು ಸಾವಿರ ರೂಪಾಯಿಯ ನೋಟು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಂತೆ ಕಂತೆ ಹೊಸ ನೋಟುಗಳನ್ನು ಭದ್ರತಾ ಪಡೆಗಳು ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ವಶಪಡಿಸಿಕೊಂಡರು. ಹೋಗಲಿ,ಇದರಿಂದ ಉಗ್ರಗಾಮಿಗಳ ದಾಳಿಗೇನಾದರೂ ಕಡಿಮೆಯಾದವೇ? ಇದೆ ಅವಧಿಯಲ್ಲಿ “ಉರಿ ದಾಳಿ” “ಪಠಾಣ್ ಕೋಟ್ ದಾಳಿ” ಯಂತಹ ಅನೇಕ ಘಟನೆಗಳು ನಡೆದವು ಮತ್ತು ಕಶ್ಮೀರ,ಈಶಾನ್ಯ ಭಾರತಗಳಲ್ಲಿ ಅಶಾಂತಿ ಮುಂದುವರೆದೇ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಇಚ್ಛಾಶಕ್ತಿ ಮತ್ತು ಪರಿಹಾರ ಹುಡುಕುವ ಮುತ್ಸದ್ದಿತನದ ಅಗತ್ಯವಿದೆಯೇ ಹೊರತು ನೋಟು ರದ್ದತಿಯದಲ್ಲ ಎಂದು ಇಂದು ರಾಜಕೀಯ ಪಂಡಿತರು ಮಾತನಾಡುತ್ತಿದ್ದಾರೆ !

3 . “ದೇಶದ ಅರ್ಥವ್ಯವಸ್ಥೆಗೆ ಪಾರದರ್ಶಕತೆ ಬರುತ್ತದೆ”

ಕಪ್ಪು ಹಣ ಸಂಗ್ರಹಿಸಿದವರಿಗೆ ತಾವಾಗಿಯೇ ಅದನ್ನು ಘೋಷಿಸಿಕೊಂಡರೆ ಶೇ 75 ನ್ನು ಮುಟ್ಟುಗೋಲು ಹಾಕಿಕೊಂಡು ಉಳಿದದ್ದನ್ನು ತೆರಿಗೆ ಪಾವತಿಸಿ ಉಳಿಸಿಕೊಳ್ಳಲು ಅವಕಾಶ ಕೊಡುವುದರಿಂದ ಪಾರದರ್ಶಕತೆ ಬರುತ್ತದೆ ಎಂದು ವಾದಿಸಲಾಗಿತ್ತು. ಆದರೆ, ಆ ಯೋಜನೆಯಡಿ ಬಂದು ಸೇರಿದ ಹಣಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಹಣ,ಈ ಹಿಂದಿನ UPA ಅವಧಿಯಲ್ಲೂ ಜಾರಿಯಲ್ಲಿದ್ದ ಸ್ವಯಂ ಆಸ್ತಿ ಘೋಷಣೆಯ ಯೋಜನೆಗಳ ಆದಿಯಲ್ಲಿ ಬಂದಿತ್ತು. ಜೊತೆಗೆ ,ಖಚಿತವಾಗಿ ಎಷ್ಟು ಮಂದಿ ಹೊಸ ತೆರಿಗೆದಾರರು ಇದರಿಂದ ತೆರಿಗೆ ಕಟ್ಟಲು ಮುಂದಾಗಿದ್ದಾರೆ ಎಂಬ ಬಗ್ಗೆ ಯಾವ ಮಂತ್ರಿಗಳು,ಆರ್ಥಿಕ ಸಲಹೆಗಾರರಾಗಲಿ ಮಾಹಿತಿ ಕೊಡುತ್ತಿಲ್ಲ .ಇತ್ತೀಚಿಗೆ ಭಾರತ ಸರ್ಕಾರದ ಪ್ರಮುಖ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣ್ಯ ರವರು 5 .5 ಲಕ್ಷ ಮಂದಿ ಹೆಸರು ಧಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಇದರಲ್ಲಿ ಎಲ್ಲರೂ ತೆರಿಗೆ ಕಟ್ಟುವವರಲ್ಲ ಬದಲಿಗೆ ಆದಾಯದ ಬಗ್ಗೆ ಮಾಹಿತಿ ನೀಡುವವರು (ರಿಟರ್ನ್ಸ್ ಸಲ್ಲಿಸುವವರು) ಇವರಲ್ಲಿ ಒಂದಷ್ಟು ಮಂದಿ ತೆರಿಗೆ ಪಾವತಿಸಬಹುದು. ಇಷ್ಟು ಸಣ್ಣ ಪ್ರಮಾಣದ ಹೊಸ ತೆರಿಗೆದಾರರು, ನೋಟು ರದ್ದತಿ ಇಲ್ಲದಿರುವಾಗಲು ಪ್ರತಿ ವರ್ಷ ಇದ್ದೆ ಇರುತ್ತಿದ್ದರು!!!
4 . “ದೇಶದ ಜಿಡಿಪಿ ದರ ವೃದ್ಧಿಯಾಗಿ ಅಭಿವೃದ್ಧಿಯ ಹೊಸ ಶೆಕೆಯೇ ಭಾರತದಲ್ಲಿ ತೆರೆದು ಕೊಳ್ಳುವುದು”

ಈ ಬಗ್ಗೆಯಂತೂ ಭವಿಷ್ಯವನ್ನು ಇಂದೇ ಬಲ್ಲವರಂತೆ ವಾದಗಳನ್ನು ಮಂಡಿಸಲಾಗಿತ್ತು,ಅವರಿಗೆ 7.9 ಇದ್ದ ಜಿಡಿಪಿ ಅಗಾಧ ಹೆಚ್ಚಳವಾಗಿ ದೇಶದ ಆರ್ಥಿಕತೆ ಭಾರಿ ಪ್ರಗತಿ ಸಾಧಿಸಲಿದೆ ಎಂದು ಬಿಂಬಿಸಲಾಗಿತ್ತು. ಇಂದು ಕೇಂದ್ರದ ಇಲಾಖೆಗಳೇ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಡಿಪಿ 5 .4 ಕ್ಕೆ ಕುಸಿದಿದೆ. ಅಂದರೆ ದೇಶಕ್ಕೆ ಸುಮಾರು 7 .5 ಲಕ್ಷ ಕೋಟಿ ರೂಗಳ ನಷ್ಟವಾಗಿದೆ.
ಇವುಷ್ಟು ಕೇಂದ್ರ ಸರ್ಕಾರ ಮಂಡಿಸಿದ್ದ ವಾದಗಳು ಮತ್ತು ಅದರ ವಾಸ್ತವಾಂಶಗಳು! ಆದರೆ,ಅವರು ಎಲ್ಲೂ ಹೇಳಿಕೊಳ್ಳದಿರುವ ಕೆಲವು ಪರಿಣಾಮಗಳು ಕೂಡಾ ನೋಟು ರದ್ಧತಿಯಿಂದ ಉಂಟಾದವು.

ಮೊದಲನೆಯದ್ದಾಗಿ , ಭಾರತದಂತಹ ಅನೌಪಚಾರಿಕ ಆರ್ಥಿಕತೆಯನ್ನು ಹೊಂದಿರುವ ದೇಶದಲ್ಲಿ ಇಂತಹ ಕ್ರಮಗಳನ್ನು ತರುವಾಗ ತೆಗೆದುಕೊಳ್ಳಬೇಕಾದ ಯಾವುದೇ ಪೂರ್ವ ಸಿದ್ದತೆಯ ಕ್ರಮಗಳು ಇಲ್ಲದೆ ನೋಟು ರದ್ದತಿ ನಡೆಯಿತು .ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಅನೇಕ ಕೈಗಾರಿಕೆಗಳು,ಆಲೆಮನೆ,ಬೆಲ್ಲದ ಮಂಡಿ,ಎಳೆನೀರು ಮಂಡಿ ಯಂತಹ 

ವ್ಯವಹಾರಗಳು, ಅನೌಪಚಾರಿಕ ಆರ್ಥಿಕತೆಯ ವಲಯಗಳು ಭಾರಿ ಹೊಡೆತ ತಿಂದವು. ಅವುಗಳಲ್ಲಿದ್ದ ಉದ್ಯೋಗಿಗಳಿಗೆ ತಿಂಗಳ ಸಂಬಳ ಅಥವಾ ದಿನಗೂಲಿಯನ್ನು ಕೊಡಲಾರದೆ ಎಷ್ಟೋ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿತವಾಯಿತು.ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟವು.

ಇದರಿಂದ ಜನ ಸಾಮಾನ್ಯರ ಬದುಕು ದೊಡ್ಡ ಪೆಟ್ಟು ತಿಂದಿರುವುದನ್ನು,ಹಣ ಚಲಾವಣೆಯಲ್ಲೂ ವ್ಯತ್ಯಯವಾಗಿರುವುದನ್ನು ಕೇಂದ್ರದ ಆರ್ಥಿಕ ಸಮೀಕ್ಷೆ ಲೆಕ್ಕಕ್ಕೆ ತೆಗೆದು ಕೊಂಡಿಲ್ಲ.

ಎರಡನೆಯದಾಗಿ, ನಗದಿನ ಕೊರತೆಯಿಂದ ವ್ಯಾಪಾರ ವಹಿವಾಟಿನಲ್ಲಿ ಉಂಟಾದ ಏರುಪೇರನ್ನು ಈವರೆಗೂ ಸರಿಪಡಿಸಿಕೊಳ್ಳಲಾಗಿಲ್ಲ .ಇತ್ತೀಚಿಗೆ ಮದ್ಯ ಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ ಮಾಡಿ ಅನ್ನದಾತರನ್ನು ಬಲಿತೆಗೆದುಕೊಳ್ಳಲಾಯಿತು.ರೈತರು ರೊಚ್ಚಿಗೆದ್ದಿದ್ದರಿಂದ ಹಾಗೆ ಮಾಡಬೇಕಾಯಿತೆಂದು ಹೇಳಲಾಯಿತು.ಅಲ್ಲಿ ರೈತರು ಯಾಕೆ ರೊಚ್ಚಿಗೆದ್ದಿದ್ದರು? ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಹಾಕಿ ವರ್ತಕರಿಂದ ಹಣ ಕೇಳಿದರು,ವರ್ತಕರು ಪೂರ್ಣ ಮೊತ್ತ ಕೊಡಲು ಆಗಲಿಲ್ಲ: ಏಕೆಂದರೆ ನಗದಿನ ಕೊರತೆ ತೀವ್ರವಾಗಿತ್ತು: ಇದ್ದುದರಲ್ಲೇ ಅವರು ಅನೇಕ ರೈತರಿಗೆ ಸಣ್ಣ ಮೊತ್ತವಾದರೂ ಕೊಡಬೇಕಿತ್ತು.ಆದರೆ ಬೆಳೆ ಸರಬರಾಜು ಮಾಡಿದ ರೈತ ಅಂದೇ ಸಾಲಗಳನ್ನು ತೀರಿಸುವ ಒತ್ತಡದಲ್ಲಿದ್ದುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅವರು ರೋಚ್ಚಿಗೆದ್ದರು.
ಇದು ನೋಟು ರದ್ದತಿಯ ಪರಿಣಾಮ ಎಂಬುದನ್ನು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವವರು ಓಪ್ಪಿಕೊಳ್ಳಬೇಕು.


#DeMoDisaster #Notebandideaths #NoteBandi 

Via Vaasu

Standard

The Aadhaar…

To the winner go the spoils. The Aadhaar Card is now “PM Modi’s Aadhaar program.” What blasphemy, what atrocious and blatant piracy of ideas. On March 12th, 2014, The Times of India told us that, “The BJP said it would review the Aadhaar programme if it comes to power at the Centre and demanded a CBI probe into the scheme, alleging it regularised the illegal stay of migrants in India. Questioning the UIDAI chairman Nandan Nilekani’s claims on Aadhaar’s achievements, BJP national spokeswoman Meenakshi Lekhi termed the programme as a “fraud” perpetrated on the people of the country while seeking the probe…. Short of naming Nilekani, Meenakshi also questioned the expenditure incurred on Aadhaar. 
“A thorough CBI probe is needed on the money spent and why Aadhaar was made mandatory,” she said.”
Today, like they praised MGNREGA (another program originally abused by Mr Modi), the World Bank is also brimming over with praise for Aadhaar, “The system in India is the most sophisticated I’ve seen,” Paul Romer, chief economist at the World Bank said, “It’s the basis for all kinds of connections that involve things like financial transactions. It could be good for the world if this became widely adopted.”
And the Economic Times, in a grand display of terrified sycophancy 

now calls Aadhaar, “PM Modi’s Aadhaar program”.
In any case, well done Manny Baby, and your team at the UIDAI led by chairman Nandan Nilekani… Thank you for one more enduring and ingenious intervention. You wrote history, so what if some idiots want to rewrite it….
@roydaniels

Standard

So,who stopped Mr Modi from speaking in Parliament? Nobody!

So who stopped Mr Modi from speaking in parliament? Nobody. But it was atrocious by any standards. Let’s look at only 8 statements he made today. “Congress feels only one family got Independence for India. The root of the problem lies there.” Nobody, except the RSS and the BJP have said that, and that’s because it hurts them so much that they did not rise to the occasion, and fight for our freedom. “Many of us couldn’t die for the nation during freedom struggle, but we’re living for India and serving India, ” says Mr Modi. Looks like he’s forgotten that when the so called “Veer,” Mr Savakar, got his opportunity, he repeatedly begged for forgiveness?
“I had said it from the Red Fort, every Prime Minister has contributed to the nation.” Yes, but you have also mocked the Congress, saying they have ruined India for 60 to 70 years, depending on your mood, and memory of history. You have mocked our founding fathers, and three martyrs, a hundred times, and in return you have made one, half hearted attempt at truth. 
“It is due to this ‘Jan Shakti’ that the person born to a poor family can become the Prime Minister of India.” Oh, come on, the poor have risen to all sorts of great positions in India, don’t keep flogging the “poor” angle. People like Gandhi, Nehru, and Ambedkar were champions of the poor. Also, because Subhas Chandra Bose was the son of a wealthy lawyer, does that make him a bad man? “From Day 1, we have been clear, we are ready for a discussion on demonetisation but some were more keen on TV bytes and not debate.” What kind of doublespeak is this? YOU ran away from parliament and ONLY spoke in TV bytes.
“It does not matter how big you are, you will have to give back what belongs to the poor. My fight is for the poor.” HaHaHa, I’m still laughing at the joke you made about poor people digging holes in the mud to earn money thanks to MGNREGA, and yet a few days back your finance minister bragged that his budget will “be the highest budget spend on MGNREGA.” Please sack him for supporting a Congress poverty alleviation idea, the only saving light in the gloom & doom of demonetisation.
“Now, middlemen no longer enjoy the benefits they did. We have stopped the corruption and loot.” Poor, deluded man. The demonetisation madness created a million new corrupt middlemen. Even some, rare, honest bankers, were driven into first time corruption. What a joker, why don’t you go to America, have some tea with Mr Trump, hug him endlessly, and mock the world with him… And finally, “Lok Sabha and State polls should be held together.” No thank you, then madmen could rule India, and we will have no time to figure out they are mad.

Standard

On hearing that the home minister said Pakistan is trying to divide India on religious lines, Rahul Gandhi said Rajnath Singh, and his “boss” Narendra Modi, are also doing the same thing. What’s the furor for? The home minister appears to have woken up after decades of independence, silly man, Pakistan’s very creation divided India on religious lines. And every day, its existence is a reminder of that fact. What’s Rajnath Singh going to say next, Water is Wet? Sugar is Sweet? And, incidentally, Rahul Gandhi is not the first to say it. Way back in 2002, India Today did a cover saying the same thing, they called Mr Modi the Master Divider, (So what has changed?) and covers earlier in the year said he was making India ride a “Hate Wave.” Well done Rahul. You’re saying a lot nowadays, and a lot of it makes great sense. All past sins of not being very relevant in the kind of nasty politics Mr Modi has unleashed on India are forgiven. Keep on Rolling. 

Don’t be cowed down, your father had to go through fire and ridicule like you will never witness. He emerged as India’s favourite son, and most loved politician, and at his peak, just before he was murdered, he would have taken apart people like Mr Modi without raising a sweat. Here are 5 things you have going for you. 


One: You have great pedigree. Forget about all this nonsense about dynasty. It’s not your fault that you have a fantastic family. Go for it, and may the spirit of your family, all the way from the immensely talented Pandit Nehru, be with you. May they give you grace.  


Two: You are young, you have great energy, you are unspoiled. You are not jaded by the grind of dirty politics, like Mr Modi and the key players in Modi Sarkar. 


Three. Your greatest strength is that you do not offer yourself as the Congress Party’s prime minster candidate. You are the party’s No.1 Campaigner. The tide will shift. Just don’t let the tempo come back to what it was last year and in the beginning of this year. 


Four: You have the force of the Congress behind you. Sure they got battered in the last general election. So what? Anyone who writes off the Congress is a fool. That’s what my father told me when I was in my teens. I thought he didn’t know what he was talking about. The decades since his death in 1975, have made we wish I could go back to that day and tell my father he was right.


Five: You are willing to fight the battle. For the first time we can see that you are enjoying this war, and are willing to attack hard and fast. Keep on Rolling. India needs to see Mr Modi attacked day in and day out. Be ridiculous, overreach, make mistakes… Just fight the war, and you will see India slowly give you more and more mind space. Demonetisation is the big mistake Mr Modi made, it will take a long, long, time for India to digest it. You have sensed this. Well done.

Standard